basavanna

 ಬುತ್ತಿ ಬಸವಣ್ಣ ಸುರಪುರ: 12ನೇ ಶತಮಾನದಲ್ಲಿ ದಾಸೋಹ ತತ್ವವನ್ನು ಪರಿಚಯಿಸಿದ ಬಸ ವಾದಿ ಶರಣರ   ನೇರಂಕಾರದ ಸಮರ್ಪಣ ಭಾವಕ್ಕೆ ಪೂರಕವಾಗಿ ಸಂಚಾರ ದಾಸೋಹ ಮೂಲಕ ಹೊಸ ಭಾಷೆ  ಬರೆದವರು ಬಸವಪ್ಪ ಶೆಟ್ಟರು

 

 ತಾಲೂಕಿನ ವಾಗಣಗೇರಿಯಲ್ಲಿ 17ನೇ ಶತಮಾನದ ಉತ್ತರಾರ್ಧದಲ್ಲಿ   ಸ್ಥಿತಿವಂತರಾಗಿದ್ದ ಶೆಟ್ಟರ ಕುಟುಂಬದಲ್ಲಿ ಜನಿಸಿದರು. ಪಾಗಣಗೇರಿ ಸುರಪೂರ ಸಂಸ್ಥಾನದ ಮೊದಲ ರಾಜಧಾನಿ. ಆಗ ರಾಜ ಗಡ್ಡಿ   ಪಿಟ್ಟ ನಾಯಕ ಎಂಬ ಅರಸ ಆಳುತ್ತಿದ್ದರು.

ಬಸವಪ್ಪ ಅವರ ಕುಟುಂಬ ಸಂಸ್ಥಾನದ ಕುದುರೆ ಪಾಳೆಯದಲ್ಲಿದ್ದರೂ.  ಅಂತೆಯೇ ಅವರಿಗೆ ‘ ಕುದುರೆಯವರು’ ಎಂಬ ಅಭಿದಾನವು ಇತ್ತು. ಅರಸ ಬಸವಪ್ಪ ಕುಟುಂಬಕ್ಕೆ ಜಮೀನು ಇನಾಮು ನೀಡಿದರು ಇದಕ್ಕೆ ಈಗಲೂ ‘  ಕುದುರಿ’   ಹೊಲ ಎಂದು ಕರೆಯುತ್ತಾರೆ.

 

 ಬಸವಪ್ಪ ಶಟ್ಟರು ಆಧ್ಯಾತ್ಮಿಕ ಜೀವಿಗಳು. ಪಕ್ಕದ ಜಾಲಿಬೆಂಚಿ ಗ್ರಾಮದ ಮಲ್ಲಿಕಾರ್ಜುನ ಅವರ ಮನೆದೇವರು   ಬಸವಾದಿ ಶರಣರ ದಾಸೋಹ ತತ್ವ ಅವರಿಗೆ ಬಹುವಾಗಿ ಆಕರ್ಷಿಸಿತು. ತಮ್ಮ ಮಕ್ಕಳಿಗೆ ಸಂಸ್ಥಾನದ  ಕುದುರೆ  ಪಾಳೆಯದ ಜವಾಬ್ದಾರಿ ವಹಿಸಿ ತಮ್ಮ ದಾಸೋಹ ತತ್ವಕ್ಕೆ ಅರ್ಪಿಸಿಕೊಂಡರು ಮನೆಯ ಮಹಿಳೆಯರು ಸಾತ್ ನೀಡಿದರು.

 

 ಬೆಳಿಗ್ಗೆ ಎದ್ದು ಮನೆಯವರು ಸಿದ್ದಪಡಿಸಿದ  ಬಕ್ಷೆ ಭೋಜನಗಳನ್ನು ಬುತ್ತಿ ಕಟ್ಟಿಕೊಂಡು ಮೊದಲು ತಮ್ಮ ಮನೆ ದೇವರಿಗೆ ಅರ್ಪಿಸುತ್ತಿದ್ದರು ನಂತರ ಜನರ ಹತ್ತಿರವೇ ಹೋಗಿ ಅವರಿಗೆ ಊಟ ನೀಡಿ ಹಸಿವು ಹಿಂಗಿಸುತ್ತಿದ್ದರು. ಪ್ರತಿನಿತ್ಯ ಅವರ ಕಾಯಕ ದಾಸೋಹವೇ ಆಯಿತು ಸಂಚಾರದ ಮೂಲಕ ಜನರ ಬಳಿ ತೆರಳಿ ತಮ್ಮ ಜೀವನವಿಡಿ ದಾಸೋಹ ಕಾಯಕ ಮಾಡಿದರು . 

Leave a Comment